ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಾನ್ಯತೆಯಲ್ಲಿ ಯುವಜನರಿಗೆ ಉದ್ಯೋಗಾಧಾರಿತ ಬದುಕನ್ನು ಕಟ್ಟಿಕೊಡುವ ಹಲವು ಡಿಪ್ಲೊಮ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ಮೊದಲ ಬಾರಿಗೆ ಶಾಸ್ತ್ರೀಯ ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮ, ಕಂಪ್ಯೂಟರ್ ಶಿಕ್ಷಣದಲ್ಲಿ ಡಿಪ್ಲೊಮ ಮತ್ತು ಫೈನಾನ್ಷಿಯಲ್ ಅಕೌಂಟಿಂಗ್ ಅಂಡ್ ಆಡಿಟಿಂಗ್ ಡಿಪ್ಲೊಮ ಶಿಕ್ಷಣ ಪ್ರಾರಂಭಿಸಲಾಗಿದೆ.
ವಿದ್ಯೆಯಲ್ಲಿ ಹಿಂದುಳಿದ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಕಳೆದ 33 ವರ್ಷಗಳಿಂದಲೂ ವರ್ಷಂಪ್ರತಿ ಸುಮಾರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪಾಠ ಪ್ರವಚನ ತರಗತಿಗಳು. ಹಿರಿಯ ಅಧ್ಯಾಪಕರಿಗೆ ಉದಯಭಾನು ವಿದ್ಯಾರತ್ನ ಪ್ರಶಸ್ತಿ ಪ್ರದಾನ.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಆರ್ಥಿಕ ನೆರವು, 'ಉದಯಭಾನು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ' ಪ್ರದಾನ, ವಿದ್ಯಾರ್ಥಿ ಆಕರ ಗ್ರಂಥ ಭಂಡಾರ ಸ್ಥಾಪನೆ - ನಿರ್ವಹಣೆ.
ನಿರುದ್ಯೋಗಿ ಮಹಿಳೆಯರು ಮತ್ತು ಯುವಕರ ಸಶಕ್ತೀಕರಣ ಯೋಜನೆ ಅಂಗವಾಗಿ ಉಚಿತ ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಕೇಂದ್ರ ಸ್ಥಾಪನೆ.